歌词
ಮರುಳ ನೀನು ಹೂವ ತರಲು ಎಲ್ಲಿ ಹೋಗಿರುವೆ
ಮರಳಿ ನಾನು ಹೂವಿನಂತೆ ಇಲ್ಲೇ ಕಾದಿರುವೆ
ಬಾನೆ ಬಂದಿದೆ ನೋಡು ನಮ್ಮ ಬಾಗಿಲಿಗೆ
ಬೇರೆ ಬೇಡೆನು ಏನು ನೀನೇ ಬೇಕೆನೆಗೆ
ಮರುಳ ನೀನು ಹೂವ ತರಲು ಎಲ್ಲಿ ಹೋಗಿರುವೆ
ಮರಳಿ ನಾನು ಹೂವಿನಂತೆ ಇಲ್ಲೇ ಕಾದಿರುವೆ
ನಿಲುವುಗನ್ನಡಿ ನನ್ನ ಕೇಳಿದೆ ನಿನ್ನ ಮಾಹಿತಿಯ
ಹೇಳು ಬೇಗನೆ ನಿನ್ನ ಕನಸಿಗೆ ನಾನೇ ಸಾರಥಿಯ
ಓ, ಕವಿತೆಯನ್ನು ಅರಸಿಕೊಂಡು ಎಲ್ಲಿ ಅಲೆದಿರುವೆ
ಪದಗಳನ್ನು ಹಿಡಿದು ನಾನು ಇಲ್ಲೇ ಕೂತಿರುವೆ
·· ಸಂಗೀತ ··
ಮುಗಿದುಕೊಟ್ಟೆನು ಎಲ್ಲ ಭಾವನೆ ನಿನ್ನ ವೈಖರಿಗೆ
ಮೂಕವಾಗಿದೆ ಜೀವ ನಿನ್ನಯ ಗೈರು ಹಾಜರಿಗೆ
ಒಲವಿನೊಲೆಯ ಉರಿಸಲೆಂದು ಎಲ್ಲಿ ಕಳೆದಿರುವೆ
ಕಿಡಿಯನೊಂದ ಇರಿಸಿ ನಾನು ಇಲ್ಲೇ ಉಳಿದಿರುವೆ
ಬಾನೆ ಬಂದಿದೆ ನೋಡು ನಮ್ಮ ಬಾಗಿಲಿಗೆ
ಬೇರೆ ಬೇಡೆನು ಏನು ನೀನೇ ಬೇಕೆನೆಗೆ
ಆಹ್ ಆಹ್ ಆಹ್ ಆಹ್ ಆಹ್ ಆಹ್...
专辑信息