歌词
ನನ್ನ ಚೆಲುವೆ ನನ್ನ ಚೆಲುವೆ
ಸಾವಿರ ಹೂಗಳಿಗಿಂತ ಚೆಲುವೆ
ನನ್ನ ಚೆಲುವೆ ಮುದ್ದು ಚೆಲುವೆ
ಚೈತ್ರದ ಚಂದ್ರನಿಗಿಂತ ಚೆಲುವೆ
ನಾನಿವಳ ನಗೆಯ ತುಂಬಾ ತುಂಬಿಕೊಳ್ಳಲೇ
ಹಾಲ್ಗೆನ್ನೆ ಮೇಲೆ ಒಮ್ಮೆ ಹರಿದು ಬರಲೇ
ನನ್ನ ಚೆಲುವೆ ನನ್ನ ಚೆಲುವೆ
ಸಾವಿರ ಹೂಗಳಿಗಿಂತ ಚೆಲುವೆ
ನನ್ನ ಚೆಲುವೆ ಮುದ್ದು ಚೆಲುವೆ
ಆ ಸೂರ್ಯನಿಗೆ ನೀ ಕಾಣದಿರು ಈ ಅಂದವನು ಬೇಡುವನು
ಮುಸ್ಸಂಜೆಯಲಿ ನೀ ಸುಳಿಯದಿರು ನಿನ್ನ ಕದ್ದು ಕೊಂಡೊಯ್ಯುವನು
ಅಗೋ ಅಗೋ ಆ ತಾರೆಯು
ಇಗೋ ಇಗೋ ತಂಗಾಳಿಯು
ಸುಳಿದು ಸುಳಿದು ನಿನ್ನ ಬಯಸಿದೆ
ನಿನ್ನ ಹೂವೊಡಲ ರಮಿಸಿದೆ
ಸರಿಯೇ ಹೇಳು
ನನ್ನ ಚೆಲುವೆ ನನ್ನ ಚೆಲುವೆ
ಸಾವಿರ ಹೂಗಳಿಗಿಂತ ಚೆಲುವೆ
ನನ್ನ ಚೆಲುವೆ ಮುದ್ದು ಚೆಲುವೆ
ನಿನ್ನಂದದಲಿ ನಾ ಮೈತೊಳೆದು ಶೃಂಗಾರವನೆ ಸೆರೆ ಹಿಡಿವೆ
ಈ ಹೂನಗೆಯ ನಾ ಬೊಗಸೆಯಲೆ ಪಡೆದು ನನ್ನೆದೆಗೆ ಅರ್ಪಿಸುವೆ
ನನ್ನ ತುಂಬ ಉಲ್ಲಾಸವು
ಕ್ಷಣ ಕ್ಷಣ ಉನ್ಮಾದವು
ಉಸಿರು ಉಸಿರಿನಲಿ ಚಲನವೂ
ಹೃದಯ ಹೃದಯಗಳ ಮಿಲನವೂ
ಇದುವೇ ಪ್ರೇಮ
ನನ್ನ ಚೆಲುವೆ ನನ್ನ ಚೆಲುವೆ
ಸಾವಿರ ಹೂಗಳಿಗಿಂತ ಚೆಲುವೆ
ನನ್ನ ಚೆಲುವೆ ಮುದ್ದು ಚೆಲುವೆ
ಚೈತ್ರದ ಚಂದ್ರನಿಗಿಂತ ಚೆಲುವೆ
ನಾನಿವಳ ನಗೆಯ ತುಂಬಾ ತುಂಬಿಕೊಳ್ಳಲೇ
ಹಾಲ್ಗೆನ್ನೆ ಮೇಲೆ ಒಮ್ಮೆ ಹರಿದು ಬರಲೇ
专辑信息
1.Nanna Cheluve