歌曲 / 歌词

Sigivem Kshanadali

Listen on Apple Music

歌词

ಏ ಹರಿ
ಸಿಗಿವೇಂ ಕ್ಷಣದಲಿ ನಿನ್ನ ನಾ
ಎಲ್ಲಿ ಹೋದರೇನು ನಿನ್ನ ಉಳಿಸೆನು
ಸಿಗಿವೇಂ ಕ್ಷಣದಲಿ ನಿನ್ನ ನಾ
ಎಲ್ಲಿ ಹೋದರೇನು ನಿನ್ನ ಉಳಿಸೆನು
ದಾನವೇಂದ್ರನಾದ ನನ್ನ ಕೆಣಕಿದ
ಅದೋನ್ಮತ್ತ ದುರುಳ ದುಷ್ಟ ಧೂರ್ತನೆ
ಸಿಗಿವೇಂ ಕ್ಷಣದಲಿ ನಿನ್ನ ನಾ
ಎಲ್ಲಿ ಹೋದರೇನು ನಿನ್ನ ಉಳಿಸೆನು
ಸಿಗಿವೇಂ ಕ್ಷಣದಲಿ ನಿನ್ನ ನಾ
ಆ ಹಾಲ ಕಡಲ ಕ್ಷಣದಿ ಕುಡಿಯುತ
ಆ ಶೇಷನೊಡಲ ಸಿಗಿದು ಬಿಸುಡುತ
ಆ ಚಕ್ರ ಕಡಿದು ಮುರಿದು ಎಸೆಯುತ
ಆ ನಿನ್ನ ಗದೆ ಪುಡಿ ಪುಡಿ ಮಾಡಿ
ಆ ಹಾಲ ಕಡಲ ಕ್ಷಣದಿ ಕುಡಿಯುತ
ಆ ಶೇಷನೊಡಲ ಸಿಗಿದು ಬಿಸುಡುತ
ಆ ಚಕ್ರ ಕಡಿದು ಮುರಿದು ಎಸೆಯುತ
ಆ ನಿನ್ನ ಗದೆ ಪುಡಿ ಪುಡಿ ಮಾಡಿ
ಶಿವನು ಹೆದರುತಿರೆ ಬ್ರಹ್ಮ ಬೆವರುತಿರೆ ಸುರರು ನಡುಗುತಿರೆ
ನರರು ಅಳುತಲಿರೆ ಕಣ್ಣಲಿ, ರೋಷದ, ಬೆಂಕಿಯ, ಚೆಲ್ಲಿ ಫಡಾ ಫಡಾ
ನಾನೀಗ
ಸಿಗಿವೇಂ ಕ್ಷಣದಲಿ ನಿನ್ನ ನಾ
ಎಲ್ಲಿ ಹೋದರೇನು ನಿನ್ನ ಉಳಿಸೆನು
ಸಿಗಿವೇಂ ಕ್ಷಣದಲಿ ನಿನ್ನ ನಾ
ಆಕಾಶ ಹೆದರಿ ಹೆದರಿ ನಡುಗಿರೆ
ಕಾರ್ಮೋಡ ಭಯದಿ ಬೆದರಿ ಚದುರಿರೆ
ಈ ಭೂಮಿ ಅಳುತ ಶರಣು ಎನುತಿರೆ
ದೇವೇಂದ್ರನೆದೆಯನು ಸೀಳಿ
ಆಕಾಶ ಹೆದರಿ ಹೆದರಿ ನಡುಗಿರೆ
ಕಾರ್ಮೋಡ ಭಯದಿ ಬೆದರಿ ಚದುರಿರೆ
ಈ ಭೂಮಿ ಅಳುತ ಶರಣು ಎನುತಿರೆ
ದೇವೇಂದ್ರನೆದೆಯನು ಸೀಳಿ
ಸ್ವರ್ಗ ನರಕಗಳ ಎಲ್ಲ ಲೋಕಗಳ ನನ್ನ ಕಾಲಡಿಯಲಿಟ್ಟು ಆಳುತಿರೆ
ಎದುರಿಸಿ ನಿಲ್ಲುವ ವೀರರು ಯಾರು ಬಿಡು ಬಿಡು
ನಾನೀಗ
ಸಿಗಿವೇಂ ಕ್ಷಣದಲಿ ನಿನ್ನ ನಾ
ಎಲ್ಲಿ ಹೋದರೇನು ನಿನ್ನ ಉಳಿಸೆನು
ದಾನವೇಂದ್ರನಾದ ನನ್ನ ಕೆಣಕಿದ
ಅದೋನ್ಮತ್ತ ದುರುಳ ದುಷ್ಟ ಧೂರ್ತನೆ
ಸಿಗಿವೇಂ ಕ್ಷಣದಲಿ ನಿನ್ನ ನಾ