歌词
ಚಲನಚಿತ್ರ
ಸೇವಂತಿ ಸೇವಂತಿ
ನಿರ್ದೇಶಕರು
ಎಸ್. ನಾರಾಯಣ್
ಹಿನ್ನೆಲೆ ಗಾಯಕರು
ಕುನಾಲ್ ಗಾಂಜವಾಲ ಮತ್ತು ಶ್ರೆಯ ಗೊಶಾಲ್
ಸಂಗೀತ ಸಂಯೊಜನೆ
ಎಸ್.ಎ. ರಾಜ್ ಕುಮಾರ್
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ನಿನ್ನ ತವರೂರಾ ನಾನೇನು ಬಲ್ಲೆನು
ನಿನ್ನ ತವರೂರಾ ನಾನೇನು ಬಲ್ಲೆನು
ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ
ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ
ತೋರಿಸು ಬಾರೆ ತವರೂರ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ ಬೀಡು
ನಟ್ಟ ನಡುವೇಲ್ಲಿ ನೀ ಹೋಗೊ ಬಳೆಗಾರ
ಅಲ್ಲಿಹುದೆ ನನ್ನಾ ತವರೂರು
ಮುತ್ತೈದೆ ಎಲೆ ಹೆಣ್ಣೆ ತೋರು ಬಾರೆ ತವರೂರಾ
ಹಂಚಿನಾ ಮನೆ ಕಾಣೋ ಕಂಚಿನಾ ಕದ ಕಾಣೋ
ಇಂಚಾಡೋವೆರಡು ಗಿಳಿ ಕಾಣೋ ಬಳೆಗಾರ
ಅಲ್ಲಿಹುದೆ ನನ್ನ ತವರೂರು
ನಿನ್ನ ತವರೂರಾ ನಾನೇನು ಬಲ್ಲೆನು
ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ
ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೆ
ಆಲೆ ಆಡುತ್ತಾವೇ ಗಾಣ ತಿರುಗುತ್ತಾವೇ
ನವಿಲು ಸಾರಂಗ ನಲಿದಾವೇ ಬಳೆಗಾರ
ಅದೆಕಾಣೊ ನನ್ನ ತವರೂರು
ಮುತ್ತೈದೆ ಎಲೆ ಹೆಣ್ಣೆ ತೋರು ಬಾರೆ ತವರೂರಾ
ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ಪರ ಹಾಕಿ
ನಟ್ಟ ನಡುವೇಲ್ಲಿ ಪಗಡೆಯ ಆಡುತ್ತಾಳೆ
ಅವಳೆ ಕಾಣೋ ನನ್ನ ಹಡೆದವ್ವ
ನಿನ್ನ ತವರೂರಾ ನಾನೀಗ ಬಲ್ಲೆನು
ಗೊತ್ತಾಯ್ತು ಎನಗೆ ಗುರಿಯಾಯ್ತು ಎಲೆಹೆಣ್ಣೆ
ಹೋಗಿ ಬರುತೀನಿ ತವರೀಗೆ
(ಶುಭಂ)