歌曲 / 歌词

Matinalli Helalarenu

Listen on Apple Music

歌词

ಮಾತಿನಲ್ಲಿ ಹೇಳಲಾರೆನು
ರೇಖೆಯಲ್ಲಿ ಗೀಚಲಾರೆನು
ಆದರೂನೂ ಹಾಡದೇನೆ ಉಳಿಯಲಾರೆನು
ಅಂಥ ರೂಪಸಿ ನನ್ನ ಪ್ರೇಯಸಿ
ಎಲ್ಲಿ ಇರುವಳೋ ನನ್ನ ಕಾಯಿಸಿ
ನಾನು ಪ್ರೇಮ ರೋಗಿ ದಯಮಾಡಿ ವಾಸಿ ಮಾಡಬೇಡಿ
ಅಂಥ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ
♪
ಕಣ್ಣಲ್ಲಿದೆ, ಆ ಕಣ್ಣಲ್ಲಿದೆ
ಹೊಂಬೆಳಕಿನ ನವ ನೀಲಾಂಜನ
ಇನ್ನೆಲ್ಲಿದೆ, ಆಹಾ ಇನ್ನೆಲ್ಲಿದೆ
ಹೂ ಮನಸಿನ ಆ ಮಧುಗುಂಜನ
ಬೇರೆ ಏನೂ ಕಾಣಲಾರೆ ಯಾರ ನಾನು ದೂರಲಾರೆ
ಸಾಕು ಇನ್ನು ದೂರವನ್ನು ತಾಳಲಾರೆನು
ನನ್ನ ಕನಸಿನಲ್ಲಿ ದಯಮಾಡಿ ಪಾಲು ಕೇಳಬೇಡಿ
ಅಂಥ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ
♪
ಮಾತಿನಲ್ಲಿ ಹೇಳಲಾರೆನು
ರೇಖೆಯಲ್ಲಿ ಗೀಚಲಾರೆನು
ಆದರೂನೂ ಹಾಡದೇನೆ ಉಳಿಯಲಾರೆನು
♪
ನಗೆಯಲ್ಲಿದೆ ಆ ಬಗೆಯಲ್ಲಿದೆ
ಬಗೆಹರಿಯದ ಆ ಅವಲೋಕನ
ನಡೆಯಲ್ಲಿದೆ ಆ ನುಡಿಯಲ್ಲಿದೆ
ತಲೆಕೆಡಿಸುವ ಆ ಆಮಂತ್ರಣ
ಕನಸಿಗಿಂತ ಚಂದವಾಗಿ ಅಳಿಸದಂಥ ಗಂಧವಾಗಿ
ಮೊದಲ ಬಾರಿ ಕಂಡ ಕ್ಷಣವೇ ಬಂಧಿಯಾದೆನು
ಹೋದೆ ನಾನು ಕಳೆದು ದಯಮಾಡಿ ಪತ್ತೆ ಮಾಡಬೇಡಿ
ಅಂಥ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ
♪
ಮಾತಿನಲ್ಲಿ ಹೇಳಲಾರೆನು
ರೇಖೆಯಲ್ಲಿ ಗೀಚಲಾರೆನು
ಆದರೂನೂ ಹಾಡದೇನೆ ಉಳಿಯಲಾರೆನು
ಅಂಥ ರೂಪಸಿ ನನ್ನ ಪ್ರೇಯಸಿ
ಎಲ್ಲಿ ಇರುವಳೋ ನನ್ನ ಕಾಯಿಸಿ
ನಾನು ಪ್ರೇಮ ರೋಗಿ ದಯಮಾಡಿ ವಾಸಿ ಮಾಡಬೇಡಿ
ಅಂಥ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ