歌词
ಗಾಳಿಯೇ ನೋಡು ಬಾ ದೀಪದ ನರ್ತನ
♪
ರಾತ್ರಿಯೇ ನೀಡು ಬಾ ಮಾಯದ ದರ್ಪಣ
ನಿನ್ನಂತೆ ಕಾಡಿಲ್ಲ ಇನ್ನಾರು ನನ್ನ
ನಿನ್ನಿಂದ ಈ ಪಾಡು ಇನ್ನೂನು ಚಂದ
ಅದೇ ಪ್ರೀತಿಯ ಲಕ್ಷಣ
♪
ಗಾಳಿಯೇ ನೋಡು ಬಾ ದೀಪದ ನರ್ತನ
♪
ಸಂಚಾರಿ ಮನ ಸೆರೆಯಾದಕ್ಷಣ
ಇದೆ ಗೂಡಲ್ಲಿ ಚಂದ್ರೋದಯ
ಸಿಹಿಯಾದ ಅಲೆ ಶುರುವಾದಾಗಲೇ
ನಿಜ ಸಂಗಾತಿ ನೀನಾದೆಯಾ
ಮಗಮ ರಿನಿನಿಸ
ಮಗಮ ಗಮಸಾದ
ಕನಸು ಕಾಲ್ಜಾರಿದೆ
ಮನಸು ಬೆರೆಸೋಣ
ಅದೇ ಪ್ರೀತಿಯ ಲಕ್ಷಣ
♪
ಗಾಳಿಯೇ ನೋಡು ಬಾ ದೀಪದ ನರ್ತನ
♪
ಹೆಸರನ್ನು ಸಹಾ ಮರೆವಂತಾ ಭಯ
ಇದು ಏನಿಂಥ ಆಕರ್ಷಣೆ
ಮರುಳಾದಾಗಲೇ ಮರು ಜನ್ಮವಿದೆ
ಬಿಗಿ ಮೌನಾನೇ ಸಂಭಾಷಣೆ
ಮಗಮ ರಿನಿನಿಸ
ಮಗಮ ಗಮಸಾದ
ಒಗಟು ಒಂದಾಗಿದೆ
ಜೊತೆಯ ಬಿಡಿಸೋಣ
ಅದೇ ಪ್ರೀತಿಯ ಲಕ್ಷಣ
♪
ಗಾಳಿಯೇ ನೋಡು ಬಾ
ದೀಪದ ನರ್ತನ