歌词
ಪ್ರೀತ್ಸೇ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯಾರೋ
ನನ್ನೇ ಪ್ರೀತಿ ಮಾಡು ಅಂತ ಹೇಳಿ ಕೊಟ್ಟೋರ್ಯಾರು
ಇದೇನೋ ನಿನ್ನ ನೋಟ, ಇದೇನಾ ಪ್ರೀತಿ ಆಟ
ಅದೆಲ್ಲಿ ಅಂತ ನಾನು ನಿನ್ನ ಹೇಗೆ ಹುಡುಕಲಿ
ಪ್ರೀತ್ಸೇ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯಾರೋ
ನನ್ನೇ ಪ್ರೀತಿ ಮಾಡು ಅಂತ ಹೇಳಿ ಕೊಟ್ಟೋರ್ಯಾರು
♪
ನೀನೇ ಮೊದಲನೇ ಬಾರಿಗೆ
ಬಂದೆ ಹೃದಯದ ಊರಿಗೆ
ಇಳಿದೆ ಮನಸಿನ ಬೀದಿಗೆ ನೀನ್ಯಾರೋ
ನಮ್ಮ ಮೊದಲನೇ ಭೇಟಿಗೆ
ನೀನು ತಿಳಿಸುವ ವೇಳೆಗೆ
ನಾನು ಬರುವುದು ಎಲ್ಲಿಗೆ ನೀನ್ಯಾರೋ
ನನ ನೋಡೇ ಅಂತ ಹಿಂದೆ ಅಲೆದೋನೋ ನೀನೇಯೇ
ನಿನ ನೋಡೋ ಆಸೆ ನನಗೆ ಬಾ ಬೇಗ
ಪ್ರೀತ್ಸೇ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯಾರೋ
ನನ್ನೇ ಪ್ರೀತಿ ಮಾಡು ಅಂತ ಹೇಳಿ ಕೊಟ್ಟೋರ್ಯಾರು
♪
ನೀನು ಕರೆಯುವೆ ನನ್ನನೇ
ಹೇಗೆ ಇರುವುದು ಸುಮ್ಮನೆ
ನಾನು ಹುಡುಕಿದೆ ನಿನ್ನನೇ, ನೀನ್ಯಾರು
ಎಲ್ಲ ಹುಡುಗರ ಕಣ್ಣನೇ
ಕದ್ದು ನೋಡುವೆ ಮೆಲ್ಲನೇ
ಎಲ್ಲೂ ಕಾಣದ ಚೊರನೆ ನೀನ್ಯಾರು
ನಿನಗಾಗಿ ಕಾದೆ ನೀನೇತಕೆ ಬರದೇ ಹೋದೆ
ನೀನಿರದೆ ನಾಳೆ ಹುಡುಗ ನನಗೇನಿದೆ
ಪ್ರೀತ್ಸೇ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯಾರೋ
ನನ್ನೇ ಪ್ರೀತಿ ಮಾಡು ಅಂತ ಹೇಳಿ ಕೊಟ್ಟೋರ್ಯಾರು
ಇದೇನೋ ನಿನ್ನ ನೋಟ, ಇದೇನಾ ಪ್ರೀತಿ ಆಟ
ಅದೆಲ್ಲಿ ಅಂತ ನಾನು ನಿನ್ನ ಹೇಗೆ ಹುಡುಕಲಿ