歌曲 / 歌词

Yeno Nannali

Listen on Apple Music

歌词

ಏನೋ ನನ್ನಲ್ಲಿ ಶುರುವಾಗಿದೆ ಹೊಸ ಯೋಚನೆ, ಅದು ಏನೋ?
ಕಣ್ಣಲ್ಲಿ ಬಲವಾಗಿದೆ ಹೊಸ ಯೋಜನೆ, ಅದು ಏನೋ?
ಪ್ರೀತಿಲಿ ಬೀಳುವ ಸೂಚನೆಯೇ? ಇದು ನಿಜವೇನೋ?
ಏನಾದರೂ ಸರಿಯೇ, ಪರಿಹಾರವು ನೀನೇನೋ?
ಒಲವಿನ ಸಹಿ ಹಾಕಿದ ಬರವಣಿಗೆ, ಅದುವೇ ಮೆರವಣಿಗೆ
ಸನಿಹದ ಸಲುಗೆ ನಾ ಬಯಸುತ ಹಗಲು-ಇರುಳು ನಿನಗೆ ಮರುಳಾದೆ
ಬಿಡುವಿನ ಕ್ಷಣವಿಲ್ಲದ ಬೆಳವಣಿಗೆ ಮೆಲ್ಲನೆ ಶುರುವಾಗಿದೆ
ದಿನಚರಿ ಮರೆಯುತ ನಾನೀಗ ಹಗಲು-ಇರುಳು ನಿನಗೆ ಮರುಳಾದೆ
♪
ನಯನದಲಿ ಬರುವೆ ನೀ ಜಾಹೀರಾತಿನಂತೆ
ಉಸಿರಿನಲಿ ಬೆರೆತೆ ಆ ಜಾದೂಗಾರ ಬರುವಂತೆ
ಮನಸಿನಲಿ ಗಲಭೆ ಖುಷಿಯ ಮೇಳದಂತೆ
ಅನಿಸಿಕೆಯ ತಿಳಿಸು, ನಿನ್ನ ಒಳಗೂ ಹೀಗೆ ಆಗಿದೆಯೋ?
ದಿನವೂ, ಕ್ಷಣವೂ ನೀನೇ ಬೇಕು ಅಂತನಿಸಿದೆ
ಮರೆತೆನು ನನ್ನ ಚುರುಕಿನ ಚಟುವಟಿಕೆ, ನಿನದೇ ಚಡಪಡಿಕೆ
ಮೊದಲನೆ ಭೇಟಿಯ ಮೆಲುಕಾಕುತ ಹಗಲು-ಇರುಳು ನಿನಗೆ ಮರುಳಾದೆ
ನಿನ್ನ ಗುಂಗಲಿ ಅಡಗಿದೆ ಚೇತರಿಕೆ, ಅದುವೇ ಕನವರಿಕೆ
ಹೊಸ ಆಸೆಗೆ ಪ್ರೇರಣೆ ನೀಡುತ ಹಗಲು-ಇರುಳು ನಿನಗೆ ಮರುಳಾದೆ
♪
ಇದುವರೆಗು ಯಾರೋ ನೀ ದಾರಿಹೋಕನಂತೆ
ಇದೇ ಮೊದಲು ಆದೆ ದಿನ ದಾರಿಯ ಕಾಯುವಂತೆ
ಕೊನೆವರೆಗೂ ಇರುವೆ ಹೆಸರ ಹಚ್ಚೆಯಂತೆ
ಪ್ರೀತಿಯಲಿ ಹೃದಯ ಎರಡು ಜೀವಕ್ಕೂ ವೇದಿಕೆ ಆಗಿದೆಯೋ?
ದಿನವೂ, ಕ್ಷಣವೂ ನೀನೇ ಬೇಕು ಅಂತನಿಸಿದೆ
ಚಲಿಸದೆ ಇರಲಿ ಜಗ ಕೆಲ ಸಮಯ, ಖಾಸಗಿ ಇದೆ ವಿಷಯ
ಅಡಚಣೆ ಇಲ್ಲದ ಕನಸಾಗುತ ಹಗಲು-ಇರುಳು ನಿನಗೆ ಮರುಳಾದೆ
ಒಲಿಸಿದೆ ನನ್ನ ಕೇಳದೇ ಅನುಮತಿಯ, ಖಾತರಿಪಡಿಸುವೆಯಾ?
ಜರುಗಿಸಿ ಜೀವವ ನಿನ್ನ ಪಾಲಿಗೆ ಹಗಲು-ಇರುಳು ನಿನಗೆ ಮರುಳಾದೆ