歌曲 / 歌词

Raktha Sambandhagala

Listen on Apple Music

歌词

ರಕ್ತ ಸಂಬಂಧಗಳ ಮೀರಿದ ಬಂಧವಿದು
ಯಾವ ಬಿಂದುವಿನಲ್ಲಿ ಸಂಧಿಸಿಹುದು
ಚಾಚಿ ತೋಳುಗಳನ್ನು ಬಿಗಿದಪ್ಪಿಕೊಳ್ಳುವುದು
ನಮ್ಮ ಪ್ರತಿ ನೋವನ್ನು ತನ್ನದೆಂದು
ಕೈಯ ಹಿಡಿದು ಹೆಜ್ಜೆ ಬೆಸೆದು
ಮುಂದೆ ಮುಂದೆ ನಡೆವ ಎಂದು
ಓ ಮೈ ಫ್ರೆಂಡ್
ಕಣ್ಣ ಕಂಬನಿಯ ಹೊರೆಸುವ ಸ್ನೇಹಿತ
ಓ ಮೈ ಫ್ರೆಂಡ್
ನಮ್ಮ ಸ್ನೆಹವಿದು ಇರಲಿ ಶಾಶ್ವತ
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
ಸೇರಿಕೊಂಡು ನಮ್ಮ ದಾರಿ
ಬದುಕು ಎಷ್ಟು ಚೆಂದವೆಂದು
ಸಾರುತಿಹುದು ಸಾರಿ ಸಾರಿ
ನೀವು ನೀವು ಅಂತ ಶುರುವಾಯ್ತು ಮೊದಲು
ಲೋ ಲೋ ಅಂತ ಈಗ ಬದಲು
ನಮ್ಮ ನಡುವೆ ಎಲ್ಲ ಕೊಂಚ ಸಂಕೋಚವು
ಕೈಯ ಹಿಡಿದು ಹೆಜ್ಜೆ ಬೆಸೆದು
ಮುಂದೆ ಮುಂದೆ ನಡೆವ ಎಂದು
ಓ ಮೈ ಫ್ರೆಂಡ್
ಕಣ್ಣ ಕಂಬನಿಯ ಹೊರೆಸುವ ಸ್ನೇಹಿತ
ಓ ಮೈ ಫ್ರೆಂಡ್
ನಮ್ಮ ಸ್ನೆಹವಿದು ಇರಲಿ ಶಾಶ್ವತ
ಮಳೆಯು ಬರಲು
ಕಾಗದಾನೇ ದೋಣಿ ಮಾಡಿ
ಬಿಟ್ಟ ನೆನಪು
ನಿನ್ನ ಕಂಡು ಬಾಲ್ಯದೆಲ್ಲ
ಆಟ ಮತ್ತೆ ಆಡೋ ಉರುಪು
ತುಂಟತನವು ಸೇರಿ ನಮ್ಮ ಸಂಗದಲ್ಲಿ
ಪಟ್ಟ ಖುಷಿಗೆ ಲೆಕ್ಕ ಎಲ್ಲಿ
ತಿಳಿಸೋ ಬಗೆಯೆ ಅರಿಯೆ ನಿಂಗೆ ಧನ್ಯವಾದವೇ
ಕೈಯ ಹಿಡಿದು ಹೆಜ್ಜೆ ಬೆಸೆದು
ಮುಂದೆ ಮುಂದೆ ನಡೆವ ಎಂದು
ಓ ಮೈ ಫ್ರೆಂಡ್
ಕಣ್ಣ ಕಂಬನಿಯ ಹೊರೆಸುವ ಸ್ನೇಹಿತ
ಓ ಮೈ ಫ್ರೆಂಡ್
ನಮ್ಮ ಸ್ನೆಹವಿದು ಇರಲಿ ಶಾಶ್ವತ