歌曲 / 歌词

Indu Ninna Edurali

Listen on Apple Music

歌词

ಇಂದು ನಿನ್ನ ಎದುರಲಿ
ಮಾತೆ ಬೇಡ ಅನಿಸಿದೆ
ನಿನ್ನ ಚಂದ ಹೆರಳಲಿ
ಒಂಟಿ ಸ್ವಪ್ನ ಸಿಲುಕಿದೆ
ಇದೇ ಥರ ಸತಾಯಿಸು
ಇಗೋ ಮನ ತಯಾರಿದೆ
ಇಂದು ನಿನ್ನ ಎದುರಲಿ
ಮಾತೆ ಬೇಡ ಅನಿಸಿದೆ
ನಿನ್ನ ಚಂದ ಹೆರಳಲಿ
ಒಂಟಿ ಸ್ವಪ್ನ ಸಿಲುಕಿದೆ
♪
ಸೂರ್ಯನು ಕ್ಷಿತಿಜದ
ಓಲೆಯನು ಉರಿಸಲು
ಪಡೆದನೇ ನಂಬದೆ
ಕಿಡಿಯನು ಎರವಲು
ಮಿತಿ ಮೀರಿದೆ ಆಕರ್ಷಣೆ
ಹುಡುಕಾಡುತಾ ನಾ ನಿನ್ನನು
ಪಡೆದಂತಿದೆ ನಾ ನನ್ನನೇ
ಅನುರಾಗಕ್ಕೀಗ ನೀನೇ ನನ್ನ ಭಾವ ಸಹಿತ ವಿವರಣೆ
ಇಂದು ನಿನ್ನ ಎದುರಲಿ
ಮಾತೆ ಬೇಡ ಅನಿಸಿದೆ
ನಿನ್ನ ಚಂದ ಹೆರಳಲಿ
ಒಂಟಿ ಸ್ವಪ್ನ ಸಿಲುಕಿದೆ
ಇದೇ ಥರ ಸತಾಯಿಸು
ಇಗೋ ಮನ ತಯಾರಿದೆ
♪
ಅನುಕ್ಷಣ ನಿನ್ನನು
ತಲುಪುವಾ ತಹ ತಹ
ಉಳಿದಿರೋ ಕಲಹವ
ನಡೆಸು ನೀ ಮುಖತಹ
ಶುರುವಾಗಿದೆ ನೀ ಬಲ್ಲೆಯಾ
ಎದೆಯಾಳದಿ ಸದ್ದಿಲ್ಲದೇ
ಸವಿನೆನಪಿನ ಕಾರ್ಯಾಲಯ
ಇರಲಾರೆ ಇನ್ನು ದೂರ ನಾನು
ಅದುವೆ ನನ್ನ ಪರಿಚಯ
ಇಂದು ನಿನ್ನ ಎದುರಲಿ
ಮಾತೆ ಬೇಡ ಅನಿಸಿದೆ
ನಿನ್ನ ಚಂದ ಹೆರಳಲಿ
ಒಂಟಿ ಸ್ವಪ್ನ ಸಿಲುಕಿದೆ
ಇದೇ ಥರ ಸತಾಯಿಸು
ಇಗೋ ಮನ ತಯಾರಿದೆ
ಇಂದು ನಿನ್ನ ಎದುರಲಿ
ಮಾತೆ ಬೇಡ ಅನಿಸಿದೆ
ನಿನ್ನ ಚಂದ ಹೆರಳಲಿ
ಒಂಟಿ ಸ್ವಪ್ನ ಸಿಲುಕಿದೆ