歌词
ಹೇಳಿಬಿಡು ಹುಡುಗಿ ನೀ ನನಗೆ ಕೊಟ್ಟದ್ದು ತಿಳಿನೀಲಿ ಕನಸಾ? ಬರಿ ಪೋಲಿ ಕನಸಾ?
ಮಾಮೂಲಿ ಕತೆಯ ತಾರುಣ್ಯ ಗೀತೆಯಲಿ ಉತ್ತರ ಕಮ್ಮಿ, ಪ್ರಶ್ನೆಯೇ ಜಾಸ್ತಿ
ದಾರೀಲಿ ಕೈ ಕಟ್ಟಿ ನಿಂತಿರಲೇ, ಹೃದಯಾನ ಸಂಪೂರ್ಣ ಬಿಚ್ಚಿಡಲೇ
ಮುಂಗುರುಳ springಅಲ್ಲಿ ಜೋತಾಡಲೇ
ಕಣ್ಣ ರೆಪ್ಪೆಯ ಮೇಲೆ ಮಲಗಿರಲೇ
ಆಸೆಗಳನೆಣಿಸಿ ಕೈಬೆರಳು ಸವಿದಿದೆ, ಎಲ್ಲಾ ಹೇಳಿದರು ಇನ್ನೇನೋ ಉಳಿದಿದೆ
ಹೇಳಿಬಿಡು ಹುಡುಗಿ ನೀ ನನಗೆ ಕೊಟ್ಟದ್ದು ತಿಳಿನೀಲಿ ಕನಸಾ? ಬರಿ ಪೋಲಿ ಕನಸಾ?
ಎಲ್ಲಿಯೂ ಹೋಗದ ನಿಂತ bus ಅಲ್ಲಿ seat ಒಂದ ಹಿಡಿದವನು ನಾನು
ಇಳಿ ಸಂಜೆಯಲಿ ನಾನು ನನ್ನ numberಗೇನೆ ಮಾಡುವೆನು phone
ಈ ನಡುವೆ ಹೀಗೆ ಎಲ್ಲಿಯೋ ನೋಡುವೆನು
ಎಲ್ಲಿಗೋ ಹೋಗುವೆನು, ಏನನ್ನೋ ಕಾಯುವೆನು
ನೀ ಸಿಕ್ಕರು ಸಿಗದಿದ್ದರೂ ಎದೆತುಂಬಹಾಡುವೆನು
ಹೇಳಿಬಿಡು ಹುಡುಗಿ ನೀ ನನಗೆ ಕೊಟ್ಟದ್ದು ತಿಳಿನೀಲಿ ಕನಸಾ? ಬರಿಪೋಲಿ ಕನಸಾ?
♪
ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು, ಗುರಿಯಿಟ್ಟು ಕಾಡಿಗೆಯ ಬೊಟ್ಟಿಡ್ಲ
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ, ಅತಿತುಂಟ ಮಾತೊಂದ ನಾನಾಡ್ಲ
ಕಿಡಿಗೇಡಿ ಕನಸೊಂದ ಕಟ್ಟಿರ್ಲಾ
ತಡ ಮಾಡದೆ ಸಣ್ಣ ಮುತ್ತಿಡ್ಲ
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲ
ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು ಗುರಿಯಿಟ್ಟು ಕಾಡಿಗೆಯ ಬೊಟ್ಟಿಡ್ಲ
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ, ಅತಿತುಂಟ ಮಾತೊಂದ ನಾನಾಡ್ಲ
♪
ಈ ನಿನ್ನ ಹಾಡಿನ ಪೋಲಿ ಸ್ವರವಾಗುವೆನು, ಹಾಡಿನೋಡೆನ್ನನು smileಆದ್ರೂ ಬರಲಿ
ನಾಚಿಕೆಯ ನೆಪದಲ್ಲಿ ಓಡದಿರು ನನ್ನಿಂದ, ನೀ ಮುಡಿದ ಸಂಪಿಗೆಯ smell ಆದ್ರೂ ಸಿಗಲಿ
ಕೆನ್ನೆಯಲಿ ಕೆಂಪಾಗಿ ಉಳಿದಿರ್ಲಾ, ಬೆನ್ನಿನಲಿ ಬೆವರಾಗಿ ನಾನಿರ್ಲಾ
ಇದು ಯಾವ್ದು ಹೇಳ್ದೆನೆ ಮುಚ್ಚಿಡ್ಲ
ಚೆಂದುಟಿಯ ಪಕ್ಕದಲೀ
♪
ಒಮ್ಮೊಮ್ಮೆ ಯೋಚಿಸುವೆ, ಯಾತಕ್ಕೆ ನಾನದೆ ಎದೆಯೊಳಗೆ ಕುರ್ಚಿಯನು ಕೆತ್ತುವ ಬಡಗಿ
ಇಬ್ಬನಿಯು ಸುಡುತಿಹುದು, ತಂಗಾಳಿ ನಗುತಿಹುದು ಇನ್ನೆಷ್ಟು ಚಳಿಗಾಲ ಕಾಯೋದೇ ಹುಡುಗಿ
ಸ್ವಪ್ನಕ್ಕೆ bedsheet ಹೊಚ್ಚಿರ್ಲ
ಚಂದ್ರನ್ಗೆಮೊಂಬತ್ತಿಕೊಟ್ಟಿರ್ಲಾ
ಇದು ಯಾವ್ದು ಹೇಳ್ದೆನೆ ಮುಚ್ಚಿಡ್ಲ
♪
ಬಿಗಿದಿಟ್ಟ ತಂಬೂರಿ ತಂತಿಯಂಥಾಗಿರುವೆ, ತುಂಡುಮಾಡೇನ್ನನು sound ಆದ್ರೂ ಬರಲಿ
ನಿನ್ನ ತಲೆ ದಿಂಬಿನ ಚಿತ್ತಾರವಾಗಿರುವೆ, ನಿನ್ನ ಕನವರಿಕೆಯಲಿ ಒಂದಾದ್ರುಸಿಗಲಿ
ಸಿಗದಂಥ ಕೊನೆ ಸಾಲು, ಬಿಟ್ಟಿರ್ಲಾ
ಯಾವ್ದಕ್ಕೂ ಕೊನೆಗೊಂದು dot ಇಡ್ಲ
ಇದು ಯಾವ್ದು ಹೇಳ್ದೆನೆ ಮುಚ್ಚಿಡ್ಲ
ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು, ಗುರಿಯಿಟ್ಟು ಕಾಡಿಗೆಯಬೊಟ್ಟಿಡ್ಲ
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ, ಅತಿತುಂಟ ಮಾತೊಂದ ನಾನಾಡ್ಲ